ದೇಶಸೈಬರ್ ಭದ್ರತೆಗೆ ಭಾರತೀಯ ರಕ್ಷಣಾ ಸಚಿವಾಲಯದಿಂದ 'ಮಾಯಾ OS' ಅಳವಡಿಕೆ
ಭಾರತದ ರಕ್ಷಣಾ ಸಚಿವಾಲಯದ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡುವ ಹ್ಯಾಕರ್ ಗಳ ಸಮಸ್ಯೆಯನ್ನು ಎದುರಿಸಲು ಸಚಿವಾಲಯ ಮುಂದಾಗಿದೆ. ಮೂಲಗಳ ಪ್ರಕಾರ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ ನ್ನು ಕೈಬಿಡಲು ಮತ್ತು ಮಾಯಾ ಎಂಬ ಸ್ಥಳೀಯ ನಿರ್ವಹಣೆ ವ್ಯವಸ್ಥೆಯನ್ನು ಅಳವಡಿಸಲು ಸಚಿವಾಲಯ ನಿರ್ಧರಿಸಿದೆ.