ವಾಣಿಜ್ಯಹಾಂಕಾಂಗ್ ಹಿಂದಿಕ್ಕಿ, ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ!
ಭಾರತೀಯ ಷೇರು ಮಾರುಕಟ್ಟೆ ಇದೇ ಮೊದಲ ಬಾರಿಗೆ ಹಾಂಕಾಂಗ್ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಷೇರುಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬ್ಲೂಮ್ ಬರ್ಗ್ ಮೀಡಿಯಾ ವರದಿ ಪ್ರಕಾರ, ಸೋಮವಾರ ಅಂತ್ಯದ ವೇಳೆಗೆ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಷೇರುಗಳ ಒಟ್ಟು ಮೌಲ್ಯ 4.33 ಟ್ರಿಲಿಯನ್ ಡಾಲರ್ ಗೆ ತಲುಪಿದೆ.