ದೇಶಕೊರೋನಾವೈರಸ್: ಭಾರತದಲ್ಲಿ 30ಕ್ಕೇರಿದ ಸೋಂಕಿತರ ಸಂಖ್ಯೆ, ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆ, ಪ್ರಧಾನಿ ಮೋದಿ ಬ್ರಸೆಲ್ಸ್ ಭೇಟಿ ರದ್ದು
ವಿಶ್ವದಾದ್ಯಂತ ಕೊರೋನವೈರಸ್ ಏಕಾಏಕಿ ಉಲ್ಪಣಿಸುತ್ತಿದ್ದು, ಭಾರತದಲ್ಲಿ ಈ ವರೆಗೂ ಮಾರಕ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಭಾರತ-ಐರೋಪ್ಯ ಒಕ್ಕೂಟ ಶೃಂಗಸಭೆ ಮುಂದೂಡಿಕೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬ್ರಸೆಲ್ಸ್ ಭೇಟಿ ಕೂಡ ರದ್ದಾಗಿದೆ ಎಂದು ತಿಳಿದುಬಂದಿದೆ.