ರಾಜ್ಯಸತತ ಮಳೆ: ರಾಜ್ಯದ ಅಲ್ಲಲ್ಲಿ ಅವಘಡ, ಭೂ ಕುಸಿತ, ರೈಲು ಸಂಚಾರ ರದ್ದು
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕರ್ನಾಟಕದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ದೂದ್ ಸಾಗರ ಬಳಿಯ ಕ್ಯಾಸಲ್ ಬಂಡೆಗಲ್ಲಿನಲ್ಲಿ ಮೊನ್ನೆ ಮಂಗಳವಾರ ಎರಡು ಭೂಕುಸಿತಗಳು ಸಂಭವಿಸಿವೆ. ಒಂದು ಜಲಪಾತದ ಬಳಿ ಸಂಭವಿಸಿದರೆ, ಇನ್ನೊಂದು ಸುರಂಗದ ಬಳಿ ಉಂಟಾಗಿದೆ.