ದೇಶಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥರನ್ನು ಭೇಟಿಯಾದ ಮೋಹನ್ ಭಾಗವತ್!
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಇಮಾಮ್ ಉಮರ್ ಇಲ್ಯಾಸಿ ಅವರನ್ನು ಭೇಟಿಯಾದರು. ಕಸ್ತೂರ ಬಾ ಮಾರ್ಗದಲ್ಲಿನ ಮಸೀದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹಿಂದೂ ಹಾಗೂ ಮುಸ್ಲಿಂ ಸಂಘದ ಮುಖ್ಯಸ್ಥರ ಗೌಪ್ಯ ಸಭೆ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.