ರಾಜಕೀಯಭಾರತ್ ಜೋಡೋ ಯಾತ್ರಾ ರಾಜಕೀಯ: ಬದ್ಧತೆ ಇಲ್ಲದ ಪಾರ್ಟ್ ಟೈಮ್ ರಾಜಕಾರಣಿ 'ಪಪ್ಪು'; ಬದಲಾಗಲಿದೆ 'ರಾಗಾ' ಇಮೇಜ್!
ಪಾದಯಾತ್ರೆಯನ್ನು ಹೆಚ್ಚಾಗಿ ಯಶಸ್ಸಿನ ಮಾರ್ಗ ಎಂದು ಪರಿಗಣಿಸಲಾಗುತ್ತಿದೆ. ಮಾಜಿ ಪ್ರಧಾನಿ ಚಂದ್ರಶೇಖರ್, ಎನ್ ಟಿ ರಾಮರಾವ್ ಕೂಡ ಬದಲಾವಣೆಗಾಗಿ ಪಾದಯಾತ್ರೆ ನಡೆಸಿದರು. ಎಲ್ ಕೆ ಅಡ್ವಾಣಿ ರಥಯಾತ್ರೆ, 2003 ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಮತ್ತು 2013 ರಲ್ಲಿ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ನಡೆಸಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ.