ದೇಶಬಂಗಲೆ ಹಾನಿ: ಬಿಎಂಸಿಯಿಂದ 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ
ತಮ್ಮ ಮುಂಬೈ ಬಂಗಲೆ ತೆರವು ಕಾರ್ಯಾಚರಣೆ "ಅಕ್ರಮ" ಎಂದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಕಟ್ಟಡ ಹಾನಿಗೊಳಿಸಿದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) 2 ಕೋಟಿ ರೂ.ಪರಿಹಾರ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.