ವಾಣಿಜ್ಯಐಜಿಎಸ್ ಟಿಯನ್ನು ತಪ್ಪಾಗಿ ಲೆಕ್ಕಹಾಕಿದ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಭಾರೀ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ
ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಪರಿಹಾರವನ್ನು ನೀಡದಿರುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವಾಗ, ಕೇಂದ್ರ ಸರ್ಕಾರ ಆಂತರಿಕ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್ ಟಿ)ಯನ್ನು ತಪ್ಪಾಗಿ ಲೆಕ್ಕಹಾಕಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ) ಹೇಳಿದೆ.