idol immersion

ಉತ್ತರ ಪ್ರದೇಶ: ಆಗ್ರಾ ನದಿಯಲ್ಲಿ ದಸರಾ ವಿಗ್ರಹ ವಿಸರ್ಜನೆ ವೇಳೆ ದುರಂತ; 12 ಮಂದಿ ಮೃತದೇಹ ಪತ್ತೆ
ಅಕ್ಟೋಬರ್ 2 ರಂದು ಖೈರಾಗರ್ ಪ್ರದೇಶದಲ್ಲಿ 13 ಯುವಕರು ದುರ್ಗಾಮಾತೆ ವಿಗ್ರಹವನ್ನು ವಿಸರ್ಜಿಸಲು ಹೋದಾಗ ಈ ದುರಂತ ಸಂಭವಿಸಿತ್ತು.

ಮದ್ದೂರಿನಲ್ಲಿಂದು ಸಾಮೂಹಿಕ ಗಣೇಶ ವಿಸರ್ಜನೆ: ಭದ್ರತೆ ಹೆಚ್ಚಳ; ಶಾಂತಿಯುತವಾಗಿ ಭಾಗವಹಿಸುವಂತೆ ಜನರಿಗೆ ಸರ್ಕಾರ ಮನವಿ
ಸಾಮೂಹಿಕ ವಿಸರ್ಜನೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಏಳು ಪೊಲೀಸ್ ವರಿಷ್ಠಾಧಿಕಾರಿಗಳು, ಮೂವರು ಹೆಚ್ಚುವರಿ ಎಸ್‌ಪಿಗಳು ಮತ್ತು 600 ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

ಬಿಹಾರ: ವಿಗ್ರಹ ವಿಸರ್ಜನೆ ವೇಳೆ ಘರ್ಷಣೆ, ಕಲ್ಲು ತೂರಾಟ
ಸರಸ್ವತಿ ದೇವಿ ವಿಗ್ರಹ ವಿಸರ್ಜಿಸಲು ಹೊರಟಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಭಾಗಲ್‌ಪುರದ ಲೋದಿಪುರದಲ್ಲಿ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ವಿಜಯದಶಮಿ ದಿನ ವಿಗ್ರಹ ವಿಸರ್ಜನೆ ವೇಳೆ ತೀವ್ರ ಪ್ರವಾಹ, ನೀರಿನಲ್ಲಿ ಮುಳುಗಿ ಕನಿಷ್ಠ 8 ಸಾವು
ನವರಾತ್ರಿ ಮುಗಿದು ವಿಜಯದಶಮಿಯಾದ ನಿನ್ನೆ ಬುಧವಾರದಂದು ದುರ್ಗಾ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಗಂಗಾ ನದಿಯಲ್ಲಿ ಅನಧಿಕೃತ ವಿಗ್ರಹ ವಿಸರ್ಜನೆ ಮಾಡಿದರೆ 50,000 ರೂ. ದಂಡ
ರಾಷ್ಟ್ರೀಯ ಹಸಿರು ಪ್ರಾಧಿಕಾರದ ನಿರ್ದೇಶನ ಅನ್ವಯ ಹರಿದ್ವಾರ ಜಿಲ್ಲಾಡಳಿತ ಈ ಸೂಚನೆ ಹೊರಡಿಸಿದೆ. ಹಬ್ಬದ ಸಂಭ್ರಮ ಜಾರಿಯಲ್ಲಿರುವುದರಿಂದ ಹರಿದ್ವಾರದಲ್ಲಿ ವಿಗ್ರಹ ವಿಸರ್ಜನೆ ಮಾಡಲೆಂದೇ ಮೂರು ಸ್ಥಳಗಳನ್ನು ನಿಗದಿ ಪಡಿಸಲಾಗಿದೆ.

