ICC Men’s T20 World Cup 2024

T20 World Cup 2024: ರಶೀದ್ ಖಾನ್- ಫಾರೂಕಿ ಮ್ಯಾಜಿಕ್; ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಜಯ
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ-20 ವಿಶ್ವಕಪ್'ನ 14ನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ಅಫ್ಘಾನಿಸ್ತಾನ ತಂಡ ಭರ್ಜರಿ ಗೆಲುವು ದಾಖಲಿಸಿದೆ.

'ಗೋಲ್ಡನ್ ಡಕೌಟ್' ಡುಮ್ಮ ತಿನ್ನೋದು ಕಮ್ಮಿ ಮಾಡು: ಅಭಿಮಾನಿ ವಿರುದ್ಧ ಪಾಕ್ ಕ್ರಿಕೆಟಿಗ ಅಜಂ ಖಾನ್ ಆಕ್ರೋಶ, ವಿಡಿಯೋ ವೈರಲ್!
ಪಾಕಿಸ್ತಾನದ ಬ್ಯಾಟ್ಸ್ಮನ್ ಅಜಂ ಖಾನ್ ತಮ್ಮ ಬ್ಯಾಟಿಂಗ್ ಮತ್ತು ಫಿಟ್ನೆಸ್ನಿಂದ ಇತ್ತೀಚಿನ ದಿನಗಳಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸ್ಟೇಡಿಯಂನಲ್ಲಿರುವ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ!
2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಬುಧವಾರ ನ್ಯೂಯಾರ್ಕ್ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರೋಹಿತ್ 37 ಎಸೆತಗಳಲ್ಲಿ 140.54 ಸ್ಟ್ರೈಕ್ ರೇಟ್ನಲ್ಲಿ 52 ರನ್ ಗಳಿಸಿದರು. 4 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಸಿಡಿಸಿದರು. ಆದರೆ, ಅವರು ಗಾಯಗೊಂಡಿದ್ದರಿಂದ 10 ನೇ ಓವರ್ನ ಅಂತ್ಯದ ನಂತರ ರಿಟೈರ್ಡ್ ಹರ್ಟ್ ಆದರು.

Welcome ''Nandini'': ICC T20 World Cup ಟೂರ್ನಿ ಜೆರ್ಸಿ ಬಿಡುಗಡೆ ಮಾಡಿದ ಐರ್ಲೆಂಡ್ ತಂಡ!
ಟಿ20 ವಿಶ್ವಕಪ್ ಟೂರ್ನಿ ನಿಮಿತ್ತ ಐರ್ಲೆಂಡ್ ತಂಡ ಕರ್ನಾಟಕ ಹಾಲು ಮಹಾಮಂಡಳಿ ''ನಂದಿನಿ''ಯ ಲೋಗೋ ಇರುವ ಜೆರ್ಸಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

