ವಾಣಿಜ್ಯಮನೆ ಬಾಡಿಗೆ ಮೇಲೆ ಜಿಎಸ್ ಟಿ ಇಲ್ಲ, ಆದ್ರೆ ಉದ್ಯಮ ನಡೆಸಲು ಮನೆ ಬಾಡಿಗೆ ಪಡೆದವರಿಗೆ ಶೇ.18ರಷ್ಟು ಜಿಎಸ್ ಟಿ: ಕೇಂದ್ರ ಸ್ಪಷ್ಟನೆ
ಮನೆ ಬಾಡಿಗೆ ಮೇಲಿನ ಜಿಎಸ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟೀಕರಣ ನೀಡಿದ್ದು, ವಸತಿ ಘಟಕವನ್ನು ಉದ್ಯಮ ನಡೆಸಲು ಬಾಡಿಗೆಗೆ ನೀಡಿದರೆ ಮಾತ್ರ ಶೇ. 18 ರಷ್ಟು ಜಿಎಸ್ ಟಿ ವಿಧಿಸಲಾಗುವುದು ಎಂದು ಹೇಳಿದೆ.