ರಾಜ್ಯಬೆಂಗಳೂರು: ಹೋಟೆಲ್ ಮಾಲೀಕನ ಜೋಕ್ನಿಂದಾಗಿ ಬೈಕ್ ಕದ್ದು ಜೈಲು ಸೇರಿದ ನೌಕರ!
ಮಾಲೀಕನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಹೋಟೆಲ್ ಸಹಾಯಕನೊಬ್ಬ ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕದ್ದು, ಇದೀಗ ಜೈಲು ಪಾಲಾಗಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕೇರಳದ ತಲಶ್ಶೇರಿ ಮೂಲದವರಾದ ಶಹೀಮ್ ಸಿ ಅಲಿಯಾಸ್ ಶಾಜ್, ಮಡಿವಾಳದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು.