Hoshiarpur rape case

ಹೋಶಿಯಾರ್ಪುರ್ ಅತ್ಯಾಚಾರ ಪ್ರಕರಣದ ಕುರಿತು ಉತ್ತರ ಪ್ರದೇಶದ ರೀತಿ ನಡೆದುಕೊಂಡಿಲ್ಲ; ಬಿಜೆಪಿಗೆ ರಾಹುಲ್ ಗಾಂಧಿ ತಿರುಗೇಟು
ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತೋರಿದ ನಿರ್ಲಜ್ಜತನವನ್ನು ಪಂಜಾಬ್ ಸರ್ಕಾರ ತೋರಿಲ್ಲ. ಒಂದು ವೇಳೆ ತೋರಿದ್ದರೆ ಅಲ್ಲಿಗೂ ಹೋಗಿ ಪ್ರತಿಭಟನೆ ನಡೆಸುತ್ತಿದ್ದೆ. ಆದರೆ ಅಲ್ಲಿರುವುದು ಜವಾಬ್ದಾರಿಯುತ ಸರ್ಕಾರ ಎಂದು ರಾಹುಲ್ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಆ ವಿಷಯದಲ್ಲಿ ಅಣ್ಣ ತಂಗಿ ಮೌನವಾಗಿರುವುದು ಏಕೆ?: ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ
ಪಂಜಾಬ್ ನಲ್ಲಿ ಬಿಹಾರದ ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಘಟನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಅಣ್ಣ ತಂಗಿ ಏಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿ ನಾಯಕಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಶನಿವಾರ ಪ್ರಶ್ನಿಸಿದ್ದಾರೆ.

