ರಾಜ್ಯಇದೀಗ ಹೊಸಕೆರೆ ಕೆರೆಯಲ್ಲಿ ನೊರೆ, ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳತ್ತ ಬೊಟ್ಟು ಮಾಡಿದ ಬಿಬಿಎಂಪಿ!
ಈ ಹಿಂದೆ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಇದೀಗ ಕೆಂಗೇರಿಯ ಹೊಸಕೆರೆ ಕೆರೆಯಿಂದಲೂ ನೊರೆ ವರದಿಯಾಗಿದೆ. ಭಾರೀ ಮಳೆಯಿಂದ ಚರಂಡಿಯ ಕೊಳಚೆ ನೀರು ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳ ಮೂಲಕ ಕೆರೆಗೆ ಬರುತ್ತಿರುವುದರಿಂದ ನೊರೆ ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹೇಳಿದ್ದಾರೆ.