ರಾಜ್ಯಕೆಸಿ ವ್ಯಾಲಿ-ಎಚ್ಎನ್ ವ್ಯಾಲಿ: 3 ಹಂತದ ಸಂಸ್ಕರಿತ ನೀರು ಹರಿಸಲು ಸರ್ಕಾರಕ್ಕೆ ಸೂಚಿಸಿ: ರಾಜ್ಯಪಾಲರಿಗೆ ರೈತ ಮುಖಂಡರ ಮನವಿ
ರಾಜಧಾನಿಯ ತ್ಯಾಜ್ಯನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮುನ್ನ ಕಡ್ಡಾಯವಾಗಿ 3 ಹಂತದ ಸಂಸ್ಕರಣೆಗೆ ಒಳಪಡಿಸಿದ ಬಳಿಕವಷ್ಟೇ ಹರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.