ದೇಶಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
ದಶಕಗಳಿಂದ ಬಗೆಹರಿಯದಿದ್ದ ಅಯೋಧ್ಯೆ ಜಮೀನು ವಿವಾದ ಪ್ರಕರಣವನ್ನು ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಇತ್ಯರ್ಥ ಪಡಿಸಿ ತೀರ್ಪು ನೀಡಿದ ನಂತರ ಕೋಮು ಶಾಂತಿ ಮತ್ತು ಸಾಮರಸ್ಯವನ್ನು ಬಲಪಡಿಸುವ ಪ್ರಯತ್ನಗಳಿಗೆ ಸ್ಪಷ್ಟ ಉದಾಹರಣೆಯಾಗಿ ಸ್ಥಳೀಯ ಕೆಲವರು ಈ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ತಮ್ಮ ಜಮೀನು ನೀಡಲು ಮುಂದಾಗಿದ್ದಾರೆ.