ದೇಶ'ಅಮಾವಾಸ್ಯೆಯಂದು ಜಾಗರೂಕರಾಗಿರಿ': ಅಪರಾಧ ತಡೆಯಲು ಹಿಂದೂ ಕ್ಯಾಲೆಂಡರ್ ಅನುಸರಿಸಿ; ಪೊಲೀಸ್ ಇಲಾಖೆ ಸುತ್ತೋಲೆ
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ಹೊರಡಿಸಿದ ವಿಚಿತ್ರ ಆಂತರಿಕ ಸುತ್ತೋಲೆಯಲ್ಲಿ, ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿಜಯ ಕುಮಾರ್ ಅವರು ಚಂದ್ರನ ಚಲನೆಯ ಆಧಾರದ ಮೇಲೆ ಸಮಯ ನಿರ್ಣಯಿಸಲು 'ಹಿಂದೂ ಪಂಚಾಂಗ' (ಕ್ಯಾಲೆಂಡರ್) ಬಳಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.