ರಾಜ್ಯಗುತ್ತಿಗೆ ವೈದ್ಯರ ವೇತನ ಪರಿಷ್ಕರಣೆ, 45 ಸಾವಿರದಿಂದ 60 ಸಾವಿರ ರೂ. ಗಳಿಗೆ ಹೆಚ್ಚಳ
ರಾಜ್ಯದ ಜಿಲ್ಲಾ, ತಾಲೂಕು ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರ ವೇತನವನ್ನು 45 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.