ವಿಶೇಷಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿ ಇಡಲು ಮುಂದಾದ ಪೋಷಕರು, ಬಾಲ್ಯ ವಿವಾಹ ಧಿಕ್ಕರಿಸಿ ಮನೆಬಿಟ್ಟು ತೆರಳಿದ 11ನೇ ತರಗತಿ ವಿದ್ಯಾರ್ಥಿನಿ!
ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದ 17 ವರ್ಷದ ಬಾಲಕಿ ತನ್ನ ಹೆತ್ತವರು ನಿಶ್ಚಯಿಸಿದ್ದ ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು 2 ಕಿಲೋಮೀಟರ್ ಕತ್ತಲೆಯಲ್ಲಿ ಓಡಿ, ನಂತರ ಬಸ್ನಲ್ಲಿ 10 ಕಿಲೋಮೀಟರ್ ಪ್ರಯಾಣಿಸಿದ್ದಾಳೆ. ತನ್ನ ಅವಸ್ಥೆಯನ್ನು ವಿವರಿಸಲು ಪಶ್ಚಿಮ ಮಿಡ್ನಾಪುರದ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಕಚೇರಿಯನ್ನು ತಲುಪಿದ್ದಾಳೆ.