ಸಿನಿಮಾ ಸುದ್ದಿಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್ಜಿ ಸ್ಟುಡಿಯೋಸ್ ಕಾಂಬಿನೇಶನ್ನಲ್ಲಿ ಹೈ-ಬಜೆಟ್ ಸಿನಿಮಾ!
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.