ದೇಶಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ: ಕಾರು ಮಾಲೀಕನ ಪತ್ತೆಹಚ್ಚಿದ ಪೊಲೀಸರು
ಸಿಆರ್'ಪಿಎಫ್ ವಾಹನಕ್ಕೆ ಸ್ಫೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿ 40 ಯೋಧರನ್ನು ಬಲಿಪಡೆದಿದ್ದ ಪುಲ್ವಾಮ ರೀತಿಯಲ್ಲಿಯೇ ಮತ್ತೊಂದು ಸಂಭಾವ್ಯ ದಾಳಿಯನ್ನು ಸೇನಾಪಡೆಗಳು ವಿಫಲಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಫೋಟಕ ತುಂಬಿದ್ದ ಕಾರಿನ ಮಾಲೀಕನನ್ನು ಪತ್ತೆಹಚ್ಚಿದ್ದಾರೆ.