ರಾಜ್ಯಕೊರೋನಾ 3ನೇ ಅಲೆ: ಮಕ್ಕಳು, ಮಹಿಳೆಯರ ನೆರವಿಗೆ ನಿಮ್ಹಾನ್ಸ್'ನಿಂದ ಸಹಾಯವಾಣಿ ಆರಂಭ
ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಮಹಿಳೆ ಹಾಗೂ ಮಕ್ಕಳ ಸಹಾಯಕ್ಕಾಗಿ ಎರಡು ಸಹಾಯವಾಣಿ ಆರಂಭಿಸುವಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)'ಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.