ಪ್ರವಾಸಇತಿಹಾಸ ಪ್ರೇಮಿಗಳಿಗಿದು ಸ್ವರ್ಗ; ಈ ಮ್ಯೂಸಿಯಂನಲ್ಲಿದೆ ಅಚ್ಚರಿಯ ಲೋಕ: ಉಡುಪಿಗೆ ಹೋದರೆ ಮಣಿಪಾಲದ ಈ ಮಾಯಾಲೋಕ ಮರೆಯದೇ ನೋಡಿ..!
ಈ ಅದ್ಭುತ ಲೋಕದ ಹಿಂದೆ ವಿಜಯನಾಥ ಶೆಣೈ ಎಂಬ ಒಬ್ಬ ವ್ಯಕ್ತಿಯ ಅಚಲ ಪರಿಶ್ರಮವಿದೆ. ಹಳೆಯ ಮನೆಗಳು ನಾಶವಾಗುವುದನ್ನು ಕಂಡು ಮರುಗಿದ ಅವರು, ಆ ಮನೆಗಳ ಪ್ರತಿಯೊಂದು ಕಂಬ, ಕಿಟಕಿ, ಬಾಗಿಲು ಮತ್ತು ಇಟ್ಟಿಗೆಗಳನ್ನು ಸಂಗ್ರಹಿಸಿ, ಅವುಗಳ ಮೂಲ ರೂಪದಲ್ಲೇ ಇಲ್ಲಿ ಮರುಸೃಷ್ಟಿಸಿದರು.