ರಾಜಕೀಯವಿಧಾನ ಪರಿಷತ್ ಚುನಾವಣೆ: ಮೈತ್ರಿ ಮುಂದುವರೆಸಲು BJP-JDS ನಿರ್ಧಾರ; ಪ್ರಜ್ವಲ್ ಪ್ರಕರಣ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಮುಂದು!
ಜೂನ್ 3 ರಂದು ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದು, ಈ ನಡುವಲ್ಲೇ ಆಡಳಿತಾರೂಢ ಕಾಂಗ್ರೆಸ್ ದೋಸ್ತಿಗಳ ವಿರುದ್ಧ ಪ್ರಜ್ವಲ್ ಪ್ರಕರಣವನ್ನೇ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.