ರಾಜಕೀಯ'ನಮ್ಮ ಮನೆಯ ಸಮಸ್ಯೆಯನ್ನು ಹೇಗೆ ಸರಿಪಡಿಸ್ಬೇಕು ಅಂತ ನನಗೆ ಗೊತ್ತಿದೆ, ಮಧ್ಯೆ ದೇವೇಗೌಡರ ಹೆಸರು ತರಬೇಡಿ'-ಹೆಚ್ ಡಿಕೆ ಭಾವುಕ
ಹಾಸನ ಜಿಲ್ಲೆಯ ಜೆಡಿಎಸ್ ನಲ್ಲಿ ಟಿಕೆಟ್ ದಳ್ಳುರಿ ಜೋರಾಗಿದೆ. ದೇವೇಗೌಡರ ಕುಟುಂಬದೊಳಗೆ ಅಪಸ್ವರ, ಭಿನ್ನಮತ ಮೂಡಿದ್ದು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸೂರಜ್ ರೇವಣ್ಣ ಮಾತನಾಡಿ ಹಾಸನ ಟಿಕೆಟ್ ಬಗ್ಗೆ ಹೆಚ್ ಡಿ ದೇವೇಗೌಡರು ಮತ್ತು ರೇವಣ್ಣನವರ ತೀರ್ಮಾನವೇ ಅಂತಿಮ, ಹಾಸನವನ್ನು ರೇವಣ್ಣನವರು ಚೆನ್ನಾಗಿ ತಿಳಿದುಕೊಂಡಿದ್ದಾರೆ.