Hasanamba Temple

ಹಾಸನಾಂಬೆ ಹುಂಡಿಯಲ್ಲಿ 75 ಗ್ರಾಂ ಚಿನ್ನ, ಒಂದೂವರೆ ಕೆ.ಜಿ ಬೆಳ್ಳಿ, ವಿದೇಶಿ ಕರೆನ್ಸಿ ಪತ್ತೆ; ಸಂಗ್ರಹವಾದ ಮೊತ್ತ ಬರೋಬ್ಬರಿ 25 ಕೋಟಿ ರೂ! Video
ಸುಮಾರು 300 ಸಿಬ್ಬಂದಿ ಎಣಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹಾಸನ: ಕೆಂಡ ಹಾಯ್ದುು, ಭಕ್ತರ ಹೃದಯ ಗೆದ್ದ ಜಿಲ್ಲಾಧಿಕಾರಿ ಲತಾ ಕುಮಾರಿ!
ಹಾಸನಾಂಬೆ ದೇವಾಲಯ ಆವರಣದಲ್ಲಿ ಇಂದು ಬೆಳಗ್ಗೆ ನಡೆದ ಕೆಂಡೋತ್ಸವದಲ್ಲಿ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿಯೇ ಜಿಲ್ಲಾಧಿಕಾರಿ ಕೆಂಡ ಹಾಯ್ದುರು.

ಹಾಸನಾಂಬ ದರ್ಶನ ಇಂದು ಕೊನೆ: 8 ಕಿ.ಮೀ ವರೆಗೆ ಧರ್ಮ ದರ್ಶನ ಸಾಲು
ಅಕ್ಟೋಬರ್ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ.

'ನಾನುಂಟು ಆ ತಾಯಿ ಉಂಟು, ನಾನುಂಟು ಭಕ್ತರುಂಟು': ಹಾಸನಾಂಬೆ ಸನ್ನಿಧಿಯಲ್ಲಿ ಡಿ.ಕೆ ಶಿವಕುಮಾರ್ ಬೇಡಿಕೊಂಡದ್ದೇನು?
ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಪತ್ನಿ ಉಷಾ ಅವರ ಜೊತೆ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ವಿಶೇಷ ಪೂಜೆ ಸಲ್ಲಿಸಿದರು.

ಹಾಸನಾಂಬ ಉತ್ಸವ: ಸೋಮವಾರ ಒಂದೇ ದಿನ 1.5 ಲಕ್ಷ ಭಕ್ತರಿಂದ ದೇವಿಯ ದರ್ಶನ
ಬೆಳಿಗ್ಗೆ 11 ಗಂಟೆಗೆ ಸರದಿಯಲ್ಲಿ ನಿಂತ ಜಿಲ್ಲಾಧಿಕಾರಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ದರ್ಶನ ಪಡೆದು, ದೇವಾಲಯದಿಂದ ಹೊರಬಂದರು.

ಶಿಷ್ಟಾಚಾರ ಕ್ರಮ ಪಾಲಿಸದೆ ಹಾಸನಾಂಬ ದೇವಾಲಯಕ್ಕೆ ಆಗಮನ: ಕಾರು ತಡೆದಿದ್ದಕ್ಕೆ ಅಧಿಕಾರಿಗಳ ವಿರುದ್ಧ ರೇವಣ್ಣ ದಂಪತಿ ಫುಲ್ ಗರಂ..!
ಶಿಷ್ಟಾಚಾರ ಕ್ರಮಗಳನ್ನು ಪಾಲಿಸದೆ ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ನೇರವಾಗಿ ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ಕಾರು ತಡೆದ ಕಂದಾಯ ಇಲಾಖೆಯ ಸಿಬ್ಬಂದಿಗಳ ವಿರುದ್ದ ಹೌಹಾರಿದರು ಎಂದು ತಿಳಿದುಬಂದಿದೆ.

Hassan: ಮೂರು ದಿನಗಳಲ್ಲಿ 3.5 ಲಕ್ಷಕ್ಕೂ ಅಧಿಕ ಭಕ್ತರಿಂದ 'ಹಾಸನಾಂಬೆ ದರ್ಶನ'; ಲಡ್ಡು ಮಾರಾಟದಿಂದ 2.24 ಕೋಟಿ ರೂ ಸಂಗ್ರಹ!
ಭಾನುವಾರ ಮಧ್ಯಾಹ್ನದ ವೇಳೆಗೆ ಜನಸಂದಣಿ ಹೆಚ್ಚಾಯಿತು. ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯಲು ಸಾಧ್ಯವಾಯಿತು.

ಹಾಸನಾಂಬ ದರ್ಶನ: ಎರಡೇ ದಿನಗಳಲ್ಲಿ 2.24 ಕೋಟಿ ರೂ ಆದಾಯ; ಆರು ಸಿಬ್ಬಂದಿ ಅಮಾನತು!
ಇಂದು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರೆ, ನಿಗದಿತ ಅವಧಿಯಲ್ಲಿ ಗಣ್ಯರು ಕೂಡ ಆಗಮಿಸಿ ದೇವರ ಪಡೆದರು. ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ.

'ಇದೇ ಕೊನೆ, ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.. ಕರ್ನಾಟಕ 3 ಭಾಗ, ಭಾರತ 2 ಭಾಗ, ಮೋದಿ ದೇಶದ ರಕ್ಷಾ ಕವಚ': "ಬ್ರಹ್ಮಾಂಡ" ಭವಿಷ್ಯ
ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ ಕಿತ್ತಾಡುತ್ತಾರೆ. ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾರೆ. ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಕರ್ನಾಟಕ ರಾಜ್ಯ ಅಧಿಕಾರದ ಕುರ್ಚಿಗಾಗಿ ಬಡಿದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತೆ.

