ವಿದೇಶವಿದ್ಯಾರ್ಥಿ ವೀಸಾ ನಿಯಮ: ಮೊಕದ್ದಮೆ ಹೂಡಿದ ಹಾರ್ವರ್ಡ್, ಎಂಐಟಿ ವಿವಿ, ಅಮೆರಿಕಾ ಸರ್ಕಾರದ ಜೊತೆ ಭಾರತ ಮಾತುಕತೆ
ಅಮೆರಿಕದಲ್ಲಿ ನೆಲೆಸಿರುವ ವಿದೇಶಗಳ ವಿದ್ಯಾರ್ಥಿಗಳು ಕೋರ್ಸ್ ಗಳ ಕಲಿಕೆಗೆ ಖುದ್ದಾಗಿ ತರಗತಿಗೆ ಹೋಗಬೇಕು, ಆನ್ ಲೈನ್ ನಲ್ಲಿ ಕೋರ್ಸ್ ತೆಗೆದುಕೊಳ್ಳುವವರು ದೇಶ ಬಿಟ್ಟು ಹೋಗಬೇಕು ಎಂಬ ವಲಸೆ ಮತ್ತು ಸುಂಕ ನಿರ್ದೇಶನಾಲಯದ ನೀತಿಯನ್ನು ಪ್ರಶ್ನಿಸಿ ಹಾರ್ವರ್ಡ್ ಯೂನಿವರ್ಸಿಟಿ ಮತ್ತು ಮಸ್ಸಚುಸೆಟ್ಸ್ ತಾಂತ್ರಿಕ ಸಂಸ್ಥೆ ಕಾನೂನು ಮೊಕದ್ದಮೆ ಹೂಡಿದೆ.