ರಾಜ್ಯಧಾರವಾಡದ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತಿ ಚುನಾವಣೆಗೆ ಮತದಾನ!
ಜಿಲ್ಲಾಕೇಂದ್ರ ಧಾರವಾಡದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮತ್ತು 2,500 ಜನಸಂಖ್ಯೆಯನ್ನು ಹೊಂದಿರುವ ಹಂಗರಕಿ ಎಂಬ ಚಿಕ್ಕ ಗ್ರಾಮವು ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾಣುತ್ತಿದೆ. ವಿಶೇಷವೆಂದರೆ 1980 ರ ದಶಕದ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಪರಿಚಯಿಸಿದಾಗಿನಿಂದಲೂ, ಗ್ರಾಮದಲ್ಲಿ ಮತದಾನ ನಡೆದಿಲ್ಲ.