ದೇಶಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಗುರುತು ಬಂದಿದ್ದು ಹೇಗೆ? ಕೇರಳದ ಪಾಲಕ್ಕಾಡ್ ಗೂ 'ಕೈ'ಗೂ ಇದೆ ನಂಟು!
ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮತ್ತು ಕಾರ್ಯಕರ್ತರನ್ನು ಪುನರುಜ್ಜೀವನಗೊಳಿಸುವ ಭಾಗವಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಅಂತಿಮ ಹಂತ ತಲುಪಿದ್ದು, ಇದೇ ಹೊತ್ತಿನಲ್ಲೇ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿ 'ಹಸ್ತ' ಗುರುತು ಆಯ್ಕೆಯಾದ ಕುತೂಹಲಕಾರಿ ಅಂಶ ಕೂಡ ಇದೀಗ ಹೊರಬಿದ್ದಿದೆ.