ವಿಶೇಷಮಾರುವೇಷದಲ್ಲಿ ಕಥೆ ಹೇಳುವ 'ಹಗಲು ವೇಷ'ಧಾರಿಗಳು: ಉತ್ತರ ಕರ್ನಾಟಕಕ್ಕೆ ದಸರಾಕ್ಕೆ ಕಲಾವಿದರ ಆಗಮನ
ನಮ್ಮ ಅಜ್ಜಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿ ಕೇಳಿದ ಕಥೆಗಳು ಇನ್ನೂ ಸ್ಮೃತಿಪಟಲದಲ್ಲಿ ಹಾಗೆಯೇ ಇದೆ. ಅದು ಸಾಮಾಜಿಕ ಕಥೆಯಿಂದ ಹಿಡಿದು ಪುರಾಣ ಕಥೆಯವರೆಗೆ ಸಾಗುತ್ತದೆ, ಅಜ್ಜಿ ಕಥೆ ಎಂಬುದು ಚಿಕ್ಕಮಕ್ಕಳಿಗೆಲ್ಲಾ ಖುಷಿಯೇ. ನಿರೂಪಣೆಯು ಎಷ್ಟು ಆಕರ್ಷಕವಾಗಿದೆಯೆಂದರೆ, ವಾಸ್ತವ ಜೀವನಕ್ಕೆ ಹತ್ತಿರವಾಗಿರುತ್ತದೆ.