ದೇಶಗುರುವಿಗೆ ವಂದನೆ ಸಲ್ಲಿಸುವ ದಿನ ಗುರುಪೂರ್ಣಿಮೆ: ಪ್ರಧಾನಿ, ಮುಖ್ಯಮಂತ್ರಿ ಸೇರಿ ಹಲವರಿಂದ ಶುಭಾಶಯ
ಇಂದು ಗುರುಪೂರ್ಣಿಮೆ ದಿನ. ಜೀವನದಲ್ಲಿ ನಿರ್ದಿಷ್ಟ ಗುರಿ, ಸಾರ್ಥಕ ಜೀವನಕ್ಕೆ ದಾರಿ ತೋರಿದ ಸಮಸ್ತ ಗುರುಗಳಿಗೆ ವಂದನೆ ಸಲ್ಲಿಸುವ ಮೂಲಕ ದೇಶಾದ್ಯಂತ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.