ರಾಜ್ಯಫೆಬ್ರವರಿ ಅಂತ್ಯದೊಳಗೆ ಗುಂಜೂರು ವಸತಿ ಯೋಜನೆ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಬಿಡಿಎ ಗಡುವು
ವರ್ತೂರು ಸಮೀಪದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಗುಂಜೂರು ವಸತಿ ಯೋಜನೆಯ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಈ ಸಂಬಂಧ ಹಲವು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಬಿಡಿಎ ಆಯುಕ್ತ ಕುಮಾರ್ ಜಿ ನಾಯ್ಕ್ ಅವರು, ಪರಿಶೀಲನೆ ನಡೆಸಿದರು.