Gruha Jyothi

ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್; ಜೀರೋ ಬಿಲ್ ಬದಲು ಬಂತು ₹5 ಸಾವಿರ ಬಿಲ್! ಬೆಸ್ಕಾಂ ವಿರುದ್ಧ ಆಕ್ರೋಶ
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಈವರೆಗೆ ನಿಯಮಿತವಾಗಿ ಜೀರೋ ಬಿಲ್ ಪಡೆಯುತ್ತಿದ್ದ ಫಲಾನುಭವಿಗಳಿಗೆ ಬೆಸ್ಕಾಂ ದಿಢೀರನೇ ₹4,000 ದಿಂದ ₹5,000 ವರೆಗೆ ಭಾರಿ ಮೊತ್ತದ ವಿದ್ಯುತ್ ಬಿಲ್ ನೀಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಗೃಹ ಜ್ಯೋತಿ ಪರಿಶೀಲನೆ: ಬಾಡಿಗೆದಾರರಿಗೆ ಆತಂಕಪಡುವ ಅಗತ್ಯವಿಲ್ಲ- ಬೆಸ್ಕಾಂ
ಪರಿಶೀಲನೆ ವೇಳೆ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ

ಗೃಹ ಜ್ಯೋತಿ ಪರಿಶೀಲನೆ ಆರಂಭ: ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪುವ ಭೀತಿ, ಬಾಡಿಗೆದಾರರ ಆತಂಕ..!
ವಾಣಿಜ್ಯ ಕಟ್ಟಡಗಳಲ್ಲಿ ವಾಸಿಸುವವರು ಸೇರಿದಂತೆ ಕೆಲ ಅನರ್ಹರು ನಿಯಮ ಉಲ್ಲಂಘಿಸಿ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಗೃಹ ಜ್ಯೋತಿ ಯೋಜನೆ ಪರಿಶೀಲನೆ ಆರಂಭ; ಮೊದಲ ದಿನ 2,500ಕ್ಕೂ ಹೆಚ್ಚು ಮನೆಗಳಿಗೆ ಬೆಸ್ಕಾಂ ಭೇಟಿ
ಬೆಸ್ಕಾಂ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಮನೆಗಳಿಗೆ ಮೀಟರ್ ರೀಡರ್‌ಗಳು ಹಾಗೂ ಕ್ಷೇತ್ರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಗ್ರಹಿಸಿದ ಮಾಹಿತಿಯನ್ನು ಸೇವಾ ಸಿಂಧು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಾಗೂ ಮುದ್ರಿತ ನಮೂನೆಯಲ್ಲಿ ದಾಖಲಿಸಲಾಯಿತು ಎಂದು ಬೆಸ್ಕಾಂ ತಿಳಿಸಿದೆ.

ಗೃಹ ಜ್ಯೋತಿ ಜುಲೈ 1 ರಿಂದ ಫಲಾನುಭವಿಗಳ ಪರಿಶೀಲನೆ; ಅಗತ್ಯವಿರುವ ದಾಖಲೆಗಳ ಬಗ್ಗೆ ಇಲ್ಲಿದೆ ಮಾಹಿತಿ...
ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಇಂಧನ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಗೃಹಜ್ಯೋತಿ ಸಬ್ಸಿಡಿಯನ್ನು ಸರ್ಕಾರವೇ ಪಾವತಿಸುತ್ತಿದೆ, ಗ್ರಾಹಕರಿಂದ ವಸೂಲಿ ಮಾಡಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ
ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಜನರಿಂದ ಪಡೆಯಲು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಇಂಧನ ಸರಬರಾಜು ನಿಗಮ ಲಿಮಿಟೆಡ್ (ಎಸ್ಕಾಂ) ಮನವಿ ಮಾಡಿವೆ ಎಂಬುದು ವದಂತಿಯಷ್ಟೇ.

ಗೃಹಜ್ಯೋತಿ ಯೋಜನೆಯ 8,844 ಕೋಟಿ ರೂ. ಬಿಲ್ ಪಾವತಿಸಿದ ಸರ್ಕಾರ: ಮಾಹಿತಿ ಹಂಚಿಕೊಂಡ ಜಾರ್ಜ್
ಇಂಧನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 1,70,90,681 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ ಶೂನ್ಯ-ಬಿಲ್ ಪ್ರಯೋಜನವನ್ನು 1.602 ಕೋಟಿಗೆ ವಿಸ್ತರಿಸಲಾಗುತ್ತಿದೆ. 1.65 ಕೋಟಿ ಕುಟುಂಬಗಳು ಶೂನ್ಯ ಬಿಲ್ ಪಡೆಯುತ್ತವೆ.

ಮನೆ ಬದಲಿಸುವ ಬಾಡಿಗೆದಾರರು ಹೊಸ ವಿಳಾಸದಲ್ಲೂ 'ಗೃಹ ಜ್ಯೋತಿ' ಯೋಜನೆ ಮುಂದುವರಿಸಬಹುದು!
ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿರುವ ಮತ್ತು ಹೊಸ ವಿಳಾಸಕ್ಕೆ ಬದಲಾಯಿಸುತ್ತಿರುವ ಬಾಡಿಗೆದಾರರು ಇನ್ನು ಮುಂದೆ ತಮ್ಮ ಹೊಸ ನಿವಾಸದಲ್ಲೂ ಯೋಜನೆಯನ್ನು ಮುಂದುವರಿಸಬಹುದು.

'ಗೃಹಜ್ಯೋತಿ' ಯಶಸ್ವಿ ಅನುಷ್ಠಾನ: ಕರ್ನಾಟಕ ಮಾದರಿ ಅನುಸರಿಸಲು ತೆಲಂಗಾಣ ಮುಂದು!
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.

