ರಾಜ್ಯವೋಟರ್ ಐಡಿ ಹಗರಣ ನಂತರ ಸರ್ಕಾರದ ಮೇಲೆ ಮತ್ತೊಂದು ಆಪಾದನೆ: ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ ಹಗರಣ ಎನ್ನುತ್ತಿರುವ ಕಾರ್ಯಕರ್ತರು!
ಶೇಕಡಾ 98ರಷ್ಟು ದೂರುಗಳು ಸಕಾರಾತ್ಮಕವಾಗಿ ವಿಲೇವಾರಿಯಾಗಿದ್ದರೂ ಕೂಡ ಕರ್ನಾಟಕದಲ್ಲಿ ಜಾರಿಯಲ್ಲಿರುವ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು(redressal system) ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಶಾಹಿಯಿಂದ ಕುಂದುಕೊರತೆಗಳನ್ನು ಸರಿಯಾಗಿ ಪರಿಹರಿಸದೆ ವಿಳಂಬವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.