gram panchayat election

ಬೆಂಗಳೂರು ಗ್ರಾಮಾಂತರ ಜಿಲ್ಲೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ
ರಾಜ್ಯ ಚುನಾವಣಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಅಭ್ಯರ್ಥಿ ಮನೆಯಿಂದ ಎರಡು ಕ್ವಿಂಟಾಲ್ ಜಿಲೇಬಿ, 1,050 ಸಮೋಸ ವಶ
ಇಲ್ಲಿನ ಹಸಂಗಂಜ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಅಭ್ಯರ್ಥಿ ಮತದಾರರಿಗೆ ಹಂಚಲು ತಂದಿದ್ದ ಎರಡು ಕ್ವಿಂಟಾಲ್ ಜಿಲೇಬಿ ಮತ್ತು 1,050 ಸಮೋಸವನ್ನು ಉನ್ನಾವೊ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ: 91,339 ಸ್ಥಾನಗಳ ಪೈಕಿ 54,041 ಸ್ಥಾನಗಳ ಫಲಿತಾಂಶ ಪ್ರಕಟ: ಕರ್ನಾಟಕ ಚುನಾವಣಾ ಆಯೋಗ
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 91,339 ಸ್ಥಾನಗಳ ಪೈಕಿ 54,041 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಗ್ರಾಪಂ ಚುನಾವಣೆ: ಮಂಗಳಮುಖಿಗೆ ಗೆಲುವಿನ ಹಾರ
ತೀವ್ರ ಕುತೂಹಲ ಮೂಡಿಸಿದ್ದ ಗ್ರಾಮ ಪಂಚಾಯಿತಿಯ ಚುನಾವಣಾ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಮತದಾರರು ಮಂಗಳಮುಖಿಗೂ ಆಯ್ಕೆ ಮಾಡುವ ಮೂಲಕ ವಿಜಯದ ಮಾಲೆ ತೊಡಿಸಿದ್ದಾರೆ.

ಸೋತರೆ ಅನರ್ಹರ ಸೌಲಭ್ಯಕ್ಕೆ ಕತ್ತರಿ ಹಾಕುವುದಾಗಿ ಬೆದರಿಸಿದ ಗಂಗಮ್ಮಗೆ ಹೀನಾಯ ಸೋಲು
ಗೆದ್ದರೆ ಏನು ಮಾಡುತ್ತೇನೆ, ಸೋತರೆ ಏನು ಮಾಡುತ್ತೇನೆ ಎಂಬುದನ್ನು ಚುನಾವಣಾ ಪ್ರಚಾರ ಕರಪತ್ರದಲ್ಲಿ ತಿಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಅಭ್ಯರ್ಥಿ ಗಂಗಮ್ಮ ಎಚ್. ಹೀನಾಯವಾಗಿ ಸೋತಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಬಿ.ಎಸ್. ಯಡಿಯೂರಪ್ಪ ವಿಶ್ವಾಸ
ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿವ ಸಾಧ್ಯತೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

2,709 ಗ್ರಾಮ ಪಂಚಾಯತ್ ಗಳಿಗೆ ಇಂದು ಎರಡನೆ ಹಾಗೂ ಕೊನೆ ಹಂತದ ಮತದಾನ ಪ್ರಗತಿಯಲ್ಲಿ: ಮತಗಟ್ಟೆಗಳಿಗೆ ಭದ್ರತೆ
ರಾಜ್ಯದ 2,709 ಗ್ರಾಮ ಪಂಚಾಯತ್ ಗಳ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದೆ. ಇಂದು 109 ತಾಲ್ಲೂಕುಗಳ ಗ್ರಾಮ ಪಂಚಾಯತ್ ಗಳಲ್ಲಿ ಮತದಾನ ನಡೆಯುತ್ತಿದ್ದು 1.05 ಲಕ್ಷಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. 39,378 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಪ್ರಗತಿಯಲ್ಲಿ: ಬೆಳಗಾವಿಯಲ್ಲಿ ಮತಗಟ್ಟೆಯ ಒಳಗೆ ಪಿಸ್ತೂಲ್ ತಂದ ಸಿಬ್ಬಂದಿ ಬಂಧನ
ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಗತಿಯಲ್ಲಿದ್ದು ರಾಜ್ಯದ ಹಲವು ಗ್ರಾಮ ಪಂಚಾಯತ್ ಗಳ ಮತಗಟ್ಟೆಗಳಿಗೆ ಬೆಳಗ್ಗೆಯಿಂದಲೇ ಮತದಾರರು ಆಗಮಿಸಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ.

28 ಗ್ರಾಮಗಳಿಗೆ ಇದು ಕೊನೆಯ ಪಂಚಾಯಿತಿ ಚುನಾವಣೆ: ಕಾರಣ ಎತ್ತಿನಹೊಳೆ ಯೋಜನೆ!
ರಾಜ್ಯದ 28 ಗ್ರಾಮ ಪಂಚಾಯತಿಗಳು ಎಂದಿಗೂ ಇನ್ನು ಮುಂದೆ ಚುನಾವಣೆ ಎದುರಿಸುವುದಿಲ್ಲ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಮುಂದಿನ 5 ವರ್ಷಗಳಲ್ಲಿ ಕಣ್ಮರೆಯಾಗಲಿವೆ.

