ರಾಜ್ಯಸರ್ಕಾರದ ಸಂಸ್ಥೆಗಳಿಂದ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಪಾವತಿಸಲು ಬಾಕಿ ಇರುವ ಹಣ 29 ಕೋಟಿ ರೂ!
ಸರ್ಕಾರದ ಸಂಸ್ಥೆಗಳಿಂದ ಸುಮಾರು 28.9 ಕೋಟಿ ರೂಪಾಯಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ ಎಸ್ ಬಿ)ಗೆ ಪಾವತಿಸಲು ಬಾಕಿಯಿದೆ. ಹಣ ಪಾವತಿಸದ ಪ್ರಮುಖ 100 ಸಂಸ್ಥೆಗಳಲ್ಲಿ ಬಿಬಿಎಂಪಿ ಮತ್ತು ಇಂದಿರಾ ಕ್ಯಾಂಟೀನ್ ಗಳು ಕೂಡ ಇವೆ.