ಅಂಕಣಗಳುಭಾರತ ಲಂಡನ್ನಿನಿಂದ 100 ಟನ್ ಬಂಗಾರ ವಾಪಸು ತಂದಿದ್ದೇಕೆಂಬ ಕಾರಣವ ಕೆದಕುತ್ತ…! (ತೆರೆದ ಕಿಟಕಿ)
ಭಾರತವು 100 ಟನ್ ಬಂಗಾರವನ್ನು ಲಂಡನ್ನಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಿಂದಕ್ಕೆ ತರಿಸಿಕೊಂಡಿತೆಂಬ ಸುದ್ದಿ ಇತ್ತೀಚೆಗೆ ಮಾಧ್ಯಮದಲ್ಲಿ ವರದಿಯಾದಾಗಿನಿಂದ ಆ ಬಗ್ಗೆ ಹಲವು ಚಕಿತ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಕೆಲವೆಡೆಗಳಲ್ಲಿ ಭಾರತವು ಅದ್ಯಾವುದೋ ಸಾಲವನ್ನು ಈಗ ತೀರಿಸಿ ಬಂಗಾರ ಬಿಡಿಸಿಕೊಂಡು ಬಂತು ಎಂಬಂಥ ಭಾವನೆಯನ್ನೂ ಬಿತ್ತಲಾಗುತ್ತಿದೆ. ಅದೇನೂ ಸತ್ಯವಲ್ಲ.