ರಾಜ್ಯಬೆಂಗಳೂರು: ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕನ್ನ; ಗೋಲ್ಡ್ ಲೋನ್ ಸಿಬ್ಬಂದಿಯಿಂದ 86 ಲಕ್ಷ ರೂ. ಲೂಟಿ!
ಬೇಲಿಯೇ ಎದ್ದು ಹೊಲ ಮೇಯ್ದುದಂತಹ ಪ್ರಕರಣವೊಂದರಲ್ಲಿ ನಗರದ ಕೆಎಲ್ಎಂ ಆಕ್ಸಿವಾ ಫಿನ್ವೆಸ್ಟ್ ಲಿಮಿಟೆಡ್ ಹಣಕಾಸು ಸಂಸ್ಥೆಯ ಕೆಲವು ಉದ್ಯೋಗಿಗಳು ತಮ್ಮ ಶಾಖೆಗಳಲ್ಲಿ ಗ್ರಾಹಕರು ಗಿರವಿಯಾಗಿ ಇಟ್ಟಿದ್ದ 85.78 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.