Godhra riots

ತೀಸ್ತಾ ಸೆಟಲ್ವಾಡ್‌ಗೆ ಸಾಮಾನ್ಯ ಜಾಮೀನು ನೀಡಿದ ಸುಪ್ರೀಂ ಕೋರ್ಟ್!
ಗೋದ್ರೋತ್ತರ ಗಲಭೆ ಅಥವಾ 2002 ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ.

ಗೋಧ್ರಾ ರೈಲು ದಹನ ಪ್ರಕರಣ: 8 ಅಪರಾಧಿಗಳಿಗೆ ಜಾಮೀನು ಮಂಜೂರು, ನಾಲ್ವರ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ರೈಲು ದಹನ ಪ್ರಕರಣದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿನ ಅವರ ಗಂಭೀರ ಪಾತ್ರವನ್ನು ಗಮನಿಸಿ ಇತರ ನಾಲ್ವರಿಗೆ ಜಾಮೀನು ನಿರಾಕರಿಸಿದೆ.

ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ 13 ವಿದ್ಯಾರ್ಥಿಗಳ ಬಂಧನ
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಕೇರಳದ ಕೆಲವು ಕ್ಯಾಂಪಸ್‌ಗಳು 2002ರ ಗೋಧ್ರಾ ಗಲಭೆ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಒಂದು ದಿನದ ನಂತರ, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಡ ಸಂಯೋಜಿತ ವಿದ್ಯಾರ್ಥಿ ತಂಡಗಳು ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದವು.

ಗುಜರಾತ್ ನಲ್ಲಿ ಏನಾಗಿತ್ತು ಅಂತ ವಾರಿಸ್ ಪಠಾಣ್ ನೆನಪಿಸಿಕೊಳ್ಳಲಿ: ಬಿಜೆಪಿ ಎಂಎಲ್ ಸಿ
ದೇಶದಲ್ಲಿರುವ ನೂರು ಕೋಟಿ ಹಿಂದೂಗಳನ್ನು ಮಣಿಸಲು 15 ಕೋಟಿ ಮುಸ್ಲಿಮರು ಸಾಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ವಕ್ತಾರ ಗಿರಿಶ್ ವ್ಯಾಸ್ ಅವರು, ಗುಜರಾತ್ ನಲ್ಲಿ ಏನಾಗಿತ್ತು ಎಂಬುದನ್ನು ಸ್ವಲ್ಪ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಮುಸ್ಲಿಂ ಯುವಕರು ಉಗ್ರರಾಗಲು ಬಾಬ್ರಿ, ಗೋದ್ರಾದಂತ ಕೋಮುಗಲಭೆಗಳೇ ಕಾರಣ!
ಬಾಬ್ರಿ ಮಸೀದಿ ಧ್ವಂಸ ಮತ್ತು ಗೋದ್ರಾ ಹತ್ಯಾಕಾಂಡದಂತಹ ಕೋಮು ಗಲಭೆಗಳಿಂದಾಗಿಯೇ ಮುಸ್ಲಿಂ ಯವಕರು ಉಗ್ರವಾದದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ...

ಗೋಧ್ರಾ ಹತ್ಯಾಕಾಂಡದಲ್ಲಿ ನಾಪತ್ತೆಯಾದ ಮಗನಿಗಾಗಿ ಇನ್ನೂ ಹುಡುಕುತ್ತಿರುವ ಪೋಷಕರು
ಗುಲ್ಬರ್ಗ್ ಸೊಸೈಟಿಯ ನಿವಾಸಿಗಳಾದ ರುಪಾ ಹಾಗೂ ದಾರಾ ಮೋದಿ ಎಂಬ ಪಾರ್ಸಿ ದಂಪತಿಗಳು ಹತ್ಯಾಕಾಂಡದಲ್ಲಿ ನಾಪತ್ತೆಯಾದ ತಮ್ಮ ಮಗನಿಗಾಗಿ ಶೋಧಕಾರ್ಯವನ್ನು ಇನ್ನೂ ಮುಂದುವರೆಸಿದ್ದಾರೆ.

ಪ್ರಧಾನಿ ಮೋದಿ ಗುಜರಾತ್ ಜನರ ಕ್ಷಮೆ ಕೋರಬೇಕು: ಕಾಂಗ್ರೆಸ್
ಗುಜರಾತ್ ಗಲಭೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

