ದೇಶಐಷಾರಾಮಿ ಕಾರಿನಲ್ಲಿ ಬಂದು ಮೇಕೆ ಕದ್ದು ಕಳ್ಳರು ಪರಾರಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್!
ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಪ್ರಯಾಗರಾಜ್ನಲ್ಲಿ ಮೇಕೆಯನ್ನು ಕದ್ದು ವೇಗವಾಗಿ ಪರಾರಿಯಾಗಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಮೇಕೆ ಮಾಲೀಕ ಮನ್ಸೂರ್ ಆಲಂ ಮತ್ತು ಸ್ಥಳೀಯರು ಕಾರಿನ ಹಿಂದೆ ಧಾವಿಸಿದರೂ, ಕಳ್ಳರು ಪರಾರಿಯಾಗಿದ್ದಾರೆ. ಕಾರಿನ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.