ರಾಜ್ಯಕಂಬಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋಣ ಓಡಿಸಲಿದ್ದಾರೆ ಐವರು ಹೆಣ್ಣು ಮಕ್ಕಳು!
ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟವಾಗಿದ್ದು, ಇದು ಕರಾವಳಿಯ ಹೆಮ್ಮೆಯ ಕಂಬಳ. ಜಾನಪದ ಕ್ರೀಡೆಯಾದ ಕಂಬಳ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಮುಖ ಮಾಡಿದೆ. ಕಂಬಳದ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇದೆ ಮೊದಲ ಬಾರಿಗೆ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡುವ ಚಿಂತನೆಯಲ್ಲಿದೆ.