ರಾಜ್ಯಬೆಂಗಳೂರು: ನೈಸ್ ರಸ್ತೆಯಲ್ಲಿ ವ್ಯಾನ್ ಪಲ್ಟಿಯಾಗಿ ಬೆಂಕಿ; ಹದಿಹರೆಯದ ಯುವತಿ ಸಜೀವ ದಹನ, 7 ಮಂದಿ ಗಾಯ
ಎಸ್ಯುವಿ ಡಿಕ್ಕಿ ಹೊಡೆದ ನಂತರ ವ್ಯಾನ್ ವೊಂದು ಉರುಳಿ ಬಿದ್ದು, ಬೆಂಕಿ ಹೊತ್ತಿಕೊಂಡು ಹದಿಹರೆಯದ ಯುವತಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಮಾದನಾಯಕನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿಯ ನೈಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.