ದೇಶಏಳು ದಶಕಗಳ ನಂತರ ಭಾರತಕ್ಕೆ ಮರು ಆಗಮನ: ನಮೀಬಿಯಾದಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಗೆ ಬಂದಿಳಿದ 8 ಚೀತಾಗಳು
ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಏಳು ದಶಕಗಳ ನಂತರ ಭಾರತಕ್ಕೆ ಎಂಟು ಚಿರತೆಗಳು ಶನಿವಾರ ದೇಶಕ್ಕೆ ಬಂದಿಳಿದಿವೆ. ನಿನ್ನೆ ರಾತ್ರಿ ನಮೀಬಿಯಾದಿಂದ ಮಾರ್ಪಡಿಸಿದ ಬೋಯಿಂಗ್ ವಿಮಾನದಲ್ಲಿ ಸುಮಾರು 10 ಗಂಟೆಗಳ ಪ್ರಯಾಣದ ಸಮಯದಲ್ಲಿ ವಿಶೇಷ ಮರದ ಪೆಟ್ಟಿಗೆಗಳಲ್ಲಿ ಚಿರತೆಗಳನ್ನು ಮಧ್ಯ ಪ್ರದೇಶದ ಗ್ವಾಲಿಯರ್ ಗೆ ಕರೆತರಲಾಯಿತು.