ರಾಜ್ಯಯಾವುದೇ ತಪ್ಪಿಲ್ಲದಿದ್ದರೂ ಮೆಮೋ: ಬೆಂಗಳೂರು ಸಂಚಾರಿ ಪೊಲೀಸರ ಅಳಲು
ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪಿಲ್ಲದಿದ್ದರೂ ಮೆಮೋ ಪಡೆಯುತ್ತಿರುವುದರಿಂದ ನಗರದ ಸಂಚಾರಿ ಪೊಲೀಸರು ಅಸಮಾಧಾನಗೊಂಡಿದ್ದು, ತಮ್ಮ ಸಂಕಟವನ್ನು ಇಲಾಖೆ ಮುಖ್ಯಸ್ಥರಾದ ಎಂ.ಎ ಸಲೀಂ ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.