Gen Rawat

ಜನರಲ್ ರಾವತ್, ಅಜಿತ್ ದೋವಲ್ ವಿರುದ್ಧ ಫೇಸ್ ಬುಕ್ ಫೋಸ್ಟ್: ಮಂಗಳೂರಿನಲ್ಲಿ ಇಬ್ಬರ ವಿರುದ್ಧ ಎಫ್ ಐಆರ್ ದಾಖಲು
ದಿವಂಗತ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಫೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ಮಂಗಳೂರು ನಗರ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಸಿಡಿಎಸ್ ಬಿಪಿನ್ ರಾವತ್ ಪಂಚ ಭೂತಗಳಲ್ಲಿ ಲೀನ: ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ
ತಮಿಳುನಾಡಿನ ಕುನೂರು ಬಳಿ ಬುಧವಾರ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾದರು. ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

ಭದ್ರತಾ ಪಡೆಗಳ ಮುಖ್ಯಸ್ಥರಿಂದ ವಾಸ್ತವ ಗಡಿ ನಿಯಂತ್ರಣ ರೇಖೆಯ ಮುನ್ನೆಲೆ ಪ್ರದೇಶಗಳಲ್ಲಿ ಸನ್ನದ್ಧತೆ ಪರಿಶೀಲನೆ
ರಕ್ಷಣಾ ಪಡೆಗಳ (ಸಿಡಿಎಸ್ ) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಿಮಾಚಲ ಪ್ರದೇಶದ ಕೇಂದ್ರೀಯ ವಲಯದ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು.

ಎರಡೂ ಕಡೆಗಳಿಂದ ದಾಳಿ ಎದುರಿಸಲು ಭಾರತ ಸಿದ್ಧವಿದೆ: ಬಿಪಿನ್ ರಾವತ್
ಎರಡೂಕಡೆಗಳಿಂದ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಭಾರತ ಸಿದ್ಧವಿದೆ ಎಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಹೇಳಿದ್ದಾರೆ.

ಬಂದೂಕು ಒಂದೇ ಪರಿಹಾರವಲ್ಲ : ಕಾಶ್ಮೀರಿ ಯುವಕರಿಗೆ ಜನರಲ್ ರಾವತ್ ಕಿವಿಮಾತು
ಬಂದೂಕು ಒಂದೇ ಪರಿಹಾರವಲ್ಲಾ ಎಂಬುದನ್ನು ಕಾಶ್ಮೀರದ ತೀವ್ರಗಾಮಿ ಯುವಕರು ಮನಗಾಣಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ರಾವತ್ ಕಿವಿಮಾತು ಹೇಳಿದ್ದಾರೆ.

