Gauri

ಮತ್ತೊಂದು ಮದುವೆಗೆ Aamir Khan ಸಿದ್ಧ?: ಬೆಂಗಳೂರು ಮಹಿಳೆ ಜೊತೆ ರಿಲೇಷನ್‌ಶಿಪ್!
ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ಅದು ಅಧಿಕೃತವಾಗಿದೆ.

'ಗೌರಿ' ಮೂಲಕ ನಟನೆ ಜೊತೆ ಗಾಯಕರಾಗಿಯೂ ಅದೃಷ್ಟ ಪರೀಕ್ಷೆಗಿಳಿದ ಸಮರ್ಜಿತ್ ಲಂಕೇಶ್!
ತಮ್ಮ ತಂದೆ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದ 'ಗೌರಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಸಮರ್ಜಿತ್ ಲಂಕೇಶ್ ನಟನಾಗಿ ಪದಾರ್ಪಣೆ ಮಾಡುತ್ತಿರುವುದಲ್ಲದೆ, ತಮ್ಮ ಮೊದಲ ಚಿತ್ರದಲ್ಲೇ ತಮ್ಮ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ.

ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಚಿತ್ರೀಕರಣ
ಇಂದ್ರಜಿತ್ ಲಂಕೇಶ್ ಅವರು ತಮ್ಮ ಮುಂಬರುವ ನಿರ್ದೇಶನದ ಗೌರಿ ಚಿತ್ರದ ಮೂಲಕ ತಮ್ಮ ಮಗ ಸಮರ್ಜಿತ್ ಅನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಇದೀಗ ಒಂದು ವೇಳಾಪಟ್ಟಿಯಂತೆ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಕೆಲವು ಪ್ರಮುಖ ಕ್ಷಣಗಳನ್ನು ಸೆರೆಹಿಡಿದಿದ್ದಾರೆ.

'ಇಂದ್ರಜಿತ್ ಲಂಕೇಶ್ ಜೊತೆ ಕೆಲಸ ಮಾಡುವುದು ನನ್ನ ಬಹುಕಾಲದ ಆಸೆ'
ಇಂದ್ರಜಿತ್ ಲಂಕೇಶ್ ಸದ್ಯ ತಮ್ಮ ಪುತ್ರ ಸಮರ್ಜಿತ್ ನಟನೆಯ ಚೊಚ್ಚಲ ಗೌರಿ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಸಾನ್ಯಾ ಅಯ್ಯರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಚಂದು ಗೌಡ ಕೂಡ ನಟಿಸಲಿದ್ದಾರೆ.

ಸಾನ್ಯಾ- ಸಮರ್ಜಿತ್ ಸಿನಿಮಾ ಟೈಟಲ್ ಫಿಕ್ಸ್: 'ಗೌರಿ' ತಂಡ ಸೇರಿದ ಮಿಸ್ ಟೀನ್ ಯೂನಿವರ್ಸ್ ಸ್ವೀಝಲ್ ಫುರ್ಟಾಡೊ!
ಗೌರಿ ಸಿನಿಮಾಗೆ ಮತ್ತೊರ್ವ ಯುವ ಪ್ರತಿಭೆ ಸೇರ್ಪಡೆಯಾಗಿದ್ದಾರೆ. ಮಿಸ್ ಟೀನ್ ಯೂನಿವರ್ಸ್ ಆಗಿ ಮೆಚ್ಚುಗೆ ಗಳಿಸಿರುವ ಉಡುಪಿಯ ಬಾರ್ಕೂರಿನ 19 ವರ್ಷದ ಸ್ವೀಝಲ್ ಫುರ್ಟಾಡೊ ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ

ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್ ಹ್ಯೂಮನ್ ರೈಟ್ಸ್ ಚಿತ್ರ ಪ್ರಶಸ್ತಿ
ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಜೀವನವನ್ನು ಆಧರಿಸಿ ಕವಿತಾ ಲಂಕೇಶ್ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

