Gandhi Jayanti

ICCಯಿಂದ ವಿಶೇಷ ಗೌರವ; ಗಾಂಧಿ ಜಯಂತಿಯಂದು ಏಕದಿನ ವಿಶ್ವಕಪ್ 2027 ಆರಂಭ ಸಾಧ್ಯತೆ!
ವಿಶ್ವಕಪ್ ಅಕ್ಟೋಬರ್ 8 ರಂದು ಪ್ರಾರಂಭವಾಗಬಹುದು ಮತ್ತು ಐಸಿಸಿ ತಿಂಗಳ ಮೊದಲ ವಾರವನ್ನು ಅಭ್ಯಾಸ ಪಂದ್ಯಗಳಿಗಾಗಿ ಮೀಸಲಿಟ್ಟಿದೆ ಎಂದು ಕ್ರಿಕ್‌ಬಜ್ ಈ ಹಿಂದೆ ವರದಿ ಮಾಡಿತ್ತು.

ಗಾಂಧೀಜಿ ಕಾಂಗ್ರೆಸ್ ನಾಯಕತ್ವ ವಹಿಸಿ 100 ವರ್ಷ: ವರ್ಷ ಪೂರ್ತಿ ಕಾರ್ಯಕ್ರಮಕ್ಕೆ ನಿರ್ಧಾರ
ಕಾರ್ಯಕ್ರಮಕ್ಕಾಗಿ ವೀರಪ್ಪ ಮೊಯ್ಲಿ, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್ ಅವರನ್ನೊಳಗೊಂಡ 60 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಕಾರ್ಯಕ್ರಮ ಕುರಿತು ಸರ್ಕಾರ ಮತ್ತು ಪಕ್ಷಕ್ಕೆ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ.

ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ: ಮಾಂಸ ಮಾರಾಟ ನಿಷೇಧ ಸಡಿಲಿಸುವಂತೆ BBMPಗೆ ಮನವಿ
ರಾಷ್ಟ್ರಪಿತ ಮಹಾತ್ಮಗಾಂಧಿ ಬಗ್ಗೆ ನಮ್ಮ ರಾಜ್ಯದ ಜನರಿಗೆ ಗೌರವವಿದೆ. ಆದರೆ, ಮಹಾಲಯ ಅಮಾವಾಸ್ಯೆ ದಿನ ಹಬ್ಬ ಆಚರಣೆ ಮಾಡಲೇಬೇಕಿದೆ. ಗಾಂಧಿಜಯಂತಿ ಎಂಬ ಕಾರಣದಿಂದ ಹಬ್ಬ ಆಚರಣೆಗೆ ಅಡಚಣೆಯಾಗಬಾರದು.

ಬೆಳಗಾವಿ: ಗಾಂಧಿ ಜಯಂತಿ ವೇಳೆ ಡಿಎಚ್‌ಒ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ 7 ಮಂದಿ ನೌಕರರ ಅಮಾನತು
ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಆವರಣದ ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯದ ಹಿಂದಿನ ಕಚೇರಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಗಾಂಧಿಯಂತೆ, ನಾವು ಅನ್ಯಾಯದ ವಿರುದ್ಧ ಭಾರತವನ್ನು ಒಗ್ಗೂಡಿಸಲು ಪ್ರತಿಜ್ಞೆ ಮಾಡುತ್ತೇವೆ: ರಾಹುಲ್ ಗಾಂಧಿ
'ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದ ರೀತಿಯಲ್ಲಿಯೇ ಭಾರತವನ್ನು ಒಗ್ಗೂಡಿಸಲು ಪ್ರತಿಜ್ಞೆ ಮಾಡುತ್ತೇವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

ಗಾಂಧಿ ಜಯಂತಿ: ನಂಜನಗೂಡಿನ ಬದನವಾಳು ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ಭೇಟಿ
ಗಾಂಧಿ ಜಯಂತಿ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮೋದ್ಯಮ ಕೇಂದ್ರಕ್ಕೆ ಇಂದು ಭಾನುವಾರ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದರು.

ಗಾಂಧಿ ಜಯಂತಿ: ಅಕ್ಟೋಬರ್ 2ರಂದು ಪ್ರಾಣಿವಧೆ, ಮಾಂಸ ಮಾರಾಟಕ್ಕ BBMP ನಿಷೇಧ
ಗಾಂಧಿ ಜಯಂತಿ ನಿಮಿತ್ತ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪಾಲಿಕೆ ಶುಕ್ರವಾರ ಆದೇಶ ಹೊರಡಿಸಿದೆ.

ಗಾಂಧಿ ಜಯಂತಿಯಂದೇ 'ಗೋಡ್ಸೆ' ಸಿನಿಮಾ ಘೋಷಿಸಿದ ಮಹೇಶ್ ಮಂಜ್ರೇಕರ್
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಜಯಂತಿ ಸಂದರ್ಭದಲ್ಲಿ, 'ಗೋಡ್ಸೆ' ಸಿನಿಮಾ ಜಾಹಿರಾತು ಬಿಡುಗಡೆಯಾಗಿದೆ. ಈ ವಿಶೇಷ ದಿನದಂದು ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಮಹೇಶ್ ಮಂಜ್ರೇಕರ್ ಘೋಷಿಸಿದ್ದಾರೆ.

ಗಾಂಧಿಜಯಂತಿಯಂದು ಖಾದಿ ಬಟ್ಟೆ ಖರೀದಿಸಿದ ಸಿಎಂ ಬೊಮ್ಮಾಯಿ: ಪತ್ನಿಗೆ ಸೀರೆ, ತಮಗೆ ಜುಬ್ಬಾ ಖರೀದಿಸಿ ಮುಖ್ಯಮಂತ್ರಿ
ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನ ಪಕ್ಕದಲ್ಲಿ ಖಾದಿ ಎಂಪೋರಿಯಂ ಉದ್ಘಾಟಿಸಿ ಸೀರೆ ಖರೀದಿ ಮಾಡಿದರು. ಮಳಿಗೆಯಲ್ಲಿ ಮೂರು ಸೀರೆ ನೋಡಿ ಕೊನೆಗೆ ಒಂದು ಖಾದಿ ಸೀರೆಯನ್ನು ಸಿಎಂ ಬೊಮ್ಮಾಯಿ ಆರಿಸಿಕೊಂಡರು.

