G20 Summit in Delhi

G20 ಶೃಂಗಸಭೆ: ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಒಪ್ಪಿಗೆ
ದೆಹಲಿಯಲ್ಲಿ ನಡೆಯುತ್ತಿರುವ ಮಹತ್ವದ ಜಿ20 ನಾಯಕರ ಶೃಂಗಸಭೆಯ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಈ ವೇಳೆ ಉಭಯ ನಾಯಕರು ಮುಕ್ತ ವ್ಯಾಪಾರ ಒಪ್ಪಂದದತ್ತ 'ವೇಗವಾಗಿ ಕೆಲಸ ಮಾಡಲು' ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

'ಜಿ20 ಶೃಂಗಸಭೆ ಉತ್ತಮವಾಗಿ ನಡೆಯುತ್ತಿದೆ': ಚೀನಾ ಅಧ್ಯಕ್ಷರ ಗೈರಿಗೆ ಅಮೆರಿಕ ಅಧ್ಯಕ್ಷರ ಪರೋಕ್ಷ ಟಾಂಗ್!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಜಿ20 ಶೃಂಗಸಭೆಗೆ ಗೈರಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೆ ಪರೋಕ್ಷ ಟಾಂಗ್ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, 'ಶೃಂಗಸಭೆ ಉತ್ತಮವಾಗಿ ನಡೆಯುತ್ತಿದೆ' ಎಂದು ಹೇಳಿದ್ದಾರೆ.
G20 ಶೃಂಗಸಭೆ ಔತಣಕೂಟ: ಭಾರತೀಯ ಉಡುಗೆಯಲ್ಲಿ ಮಿಂಚಿದ ನಾಯಕರು, ಸ್ವಾಗತ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು
ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.

ವಿಮಾನದಲ್ಲಿ ತಾಂತ್ರಿಕ ದೋಷ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ದೆಹಲಿಯಲ್ಲೇ ವಾಸ
2 ದಿನಗಳ ಜಿ20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಾಂತ್ರಿಕ ಸಮಸ್ಯೆಯಿಂದಾಗಿ ಭಾನುವಾರ ರಾತ್ರಿ ದೆಹಲಿಯಲ್ಲೇ ಕಳೆಯುವಂತಾಗಿದೆ.

'ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ': ಆಫ್ರಿಕನ್ ಒಕ್ಕೂಟದ ಪ್ರಶಂಸೆ
ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಮಾರ್ಪಟ್ಟಿದ್ದು, ಚೀನಾಕ್ಕಿಂತ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಆಫ್ರಿಕನ್ ಒಕ್ಕೂಟ ಪ್ರಶಂಸಿಸಿದೆ.

ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ, ಪ್ರಚೋದನೆ: ಕೆನಡಾ ಪ್ರಧಾನಿಗೆ ಪ್ರಧಾನಿ ಮೋದಿ ಹೇಳಿಕೆ
ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ, ಪ್ರಚೋದನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬಳಿ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

G20 ಶೃಂಗಸಭೆ: ವಿಶ್ವ ನಾಯಕರಿಗೆ ವಿಶೇಷ ಔತಣಕೂಟ, ಪಕ್ಕಾ ಭಾರತೀಯ ಶೈಲಿಯ ಸಸ್ಯಾಹಾರಿ ಖಾದ್ಯಗಳು!
ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದು, ಈ ಔತಣಕೂಟದ ವಿಶೇಷ ತಿನಿಸುಗಳ ಪಟ್ಟಿ ಇದೀಗ ಬಹಿರಂಗಗೊಂಡಿದೆ.

ಹವಾಮಾನ ವೀಕ್ಷಣೆಗೆ ವಿಶೇಷ G20 ಉಪಗ್ರಹ: ಭಾರತ ಪ್ರಸ್ತಾಪ
ಜಾಗತಿಕ ದಕ್ಷಿಣದ ದೇಶಗಳಿಗೆ ನೆರವು ನೀಡುವ ಉದ್ದೇಶದಿಂದ ಭಾರತವು ಶನಿವಾರ ಪರಿಸರ ಮತ್ತು ಹವಾಮಾನ ವೀಕ್ಷಣೆಗಾಗಿ ಜಿ20 ಉಪಗ್ರಹ ಮಿಷನ್ ಅನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ.

ಕೃತಜ್ಞತೆಗಳು, ಆದರೆ... 'ಹೆಮ್ಮೆಪಡುವಂಥದ್ದು ಏನೂ ಇಲ್ಲ': ರಷ್ಯಾ ಯುದ್ಧದ ಕುರಿತು G20 ಹೇಳಿಕೆಗೆ ಉಕ್ರೇನ್ ಖಡಕ್ ಪ್ರತಿಕ್ರಿಯೆ
ತನ್ನ ಮೇಲಿನ ರಷ್ಯಾದ ಆಕ್ರಮಣದ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಜಿ20 ರಾಷ್ಟ್ರಗಳಿಗೆ ಉಕ್ರೇನ್ ಕೃತಜ್ಞತೆ ಸಲ್ಲಿಸಿದೆಯಾದರೂ ಹೆಮ್ಮೆಪಡಲು ಏನೂ ಇಲ್ಲ ಎಂದು ಹೇಳುವ ಮೂಲಕ ತನ್ನ ಬೆಂಬಲಕ್ಕೆ ನಿಲ್ಲದ ರಾಷ್ಟ್ರಗಳಿಗೆ ನೇರವಾಗಿಯೇ ತಿವಿದಿದೆ.

