G20 India

G-20 ಶೃಂಗಸಭೆಯ ಅತಿಥಿಗಳಿಗೆ ಉತ್ತರ ಪ್ರದೇಶದ ಅಪರೂಪದ ಹಿತ್ತಾಳೆಯ ಕಮಲ ಸ್ಮರಣಿಕೆ ಉಡುಗೊರೆ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಶನಿವಾರ ಆರಂಭವಾದ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯವಾಗಲಿದೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವದ ರಾಷ್ಟ್ರಗಳ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಂದೇಲ್‌ಖಂಡ್‌ನ ಮಹೋಬಾದ ಕಮಲದ ಆಕಾರದ 'ಕಮಲಂ' ಎಂಬ ವಿಶಿಷ್ಟ ಹಿತ್ತಾಳೆ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಜಾಗತಿಕ ವಿಶ್ವಾಸ ಕೊರತೆ ನಿವಾರಣೆಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಬದಲಾವಣೆಯ ಮಂತ್ರವಾಗಬಹುದು: ಪ್ರಧಾನಿ ಮೋದಿ
ಇಂದು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ವೋಲ್ಟೇಜ್ ಜಿ20 ಶೃಂಗಸಭೆ ಆರಂಭವಾಗಿದೆ. ತಮ್ಮ ಸ್ವಾಗತ ಭಾಷಣದಲ್ಲಿ 'ಒಂದು ಭೂಮಿ' ಧ್ಯೇಯವಾಕ್ಯ ಮೇಲೆ ಮಾತನಾಡುವಾಗ ಪ್ರಧಾನಿ ಮೋದಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ.

ಭಾರತದ G20 ಅಧ್ಯಕ್ಷತೆ ಎಲ್ಲವನ್ನೂ ಒಳಗೊಳ್ಳುವ, ನಿರ್ಣಾಯಕ ಮತ್ತು ಕಾರ್ಯ-ಆಧಾರಿತ: ಪ್ರಧಾನಿ ಮೋದಿ
ಇಂದು ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪ್ ವೇದಿಕೆಯಲ್ಲಿ ಜಿ20 ಶೃಂಗಸಭೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಆರಂಭಕ್ಕೆ ಮುನ್ನ, G 20 'ಮಾನವ-ಕೇಂದ್ರಿತ' ಮತ್ತು ಅಂತರ್ಗತ ಅಭಿವೃದ್ಧಿಯತ್ತ ಹೊಸ ಮಾರ್ಗವನ್ನು ರೂಪಿಸಲಿದೆ ಎಂದು ಹೇಳಿದ್ದಾರೆ.

ಭಿತ್ತಿಚಿತ್ರ, ಗೀಚುಬರಹ, ಸುಂದರ ವಿನ್ಯಾಸದ ಚಿತ್ರಗಳು, ಬೆಳಕು... ಜಿ20ಗೆ ನವ ವಧುವಿನಂತೆ ಸಿಂಗಾರಗೊಂಡಿದೆ ದೆಹಲಿ!
ಜಿ20 ಶೃಂಗಸಭೆಗೆ ರಾಜಧಾನಿ ದೆಹಲಿ ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಕಾಶಮಾನವಾದ ಭಿತ್ತಿಚಿತ್ರಗಳು, ಗೀಚುಬರಹ ಮತ್ತು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸಲಾಗಿದೆ.

