ರಾಜ್ಯಲಾಕ್ಡೌನ್ ಎಫೆಕ್ಟ್: ಒಬ್ಬನೇ ಇರಲು ಬೋರ್, ಸೂಟ್ಕೇಸ್ನಲ್ಲಿ ಸ್ನೇಹಿತ ಕರೆತಂದಾತ ಮಂಗಳೂರಿನಲ್ಲಿ ಪೊಲೀಸರ ಅತಿಥಿ
ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್ ಡೌನ್ ಹೇರಿದೆ. ಇದರ ನಡುವೆಯೇ ಮಂಗಳೂರಿನಲ್ಲಿ ಓರ್ವ ಭೂಪ ಮನೆಯಲ್ಲಿ ತಾನೊಬ್ಬನೇ ಇರಲು ಬೋರ್ ಆಗುತ್ತಿದೆ ಎಂದು ಹೇಳಿ ಸೂಟ್ ಕೇಸ್ ನಲ್ಲಿ ತನ್ನ ಸ್ನೇಹಿತನನ್ನು ಕರೆತಂದು ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.